
Ruthumana - ಋತುಮಾನ
Podcast von Ruthumana
Nimm diesen Podcast mit

Mehr als 1 Million Hörer*innen
Du wirst Podimo lieben und damit bist du nicht allein
Mit 4,7 Sternen im App Store bewertet
Alle Folgen
9 Folgen
ಗಿರೀಶ್ ಕಾರ್ನಾಡರ ಜನ್ಮದಿನದ ನೆನೆಪಿನಲ್ಲಿ ಜಿ. ರಾಜಶೇಖರರು ಕಾರ್ನಾಡರ ಸಾರ್ವಜನಿಕ ಜೀವನ ಮತ್ತು ಬರಹ ಒಂದಕ್ಕೊಂದು ಹೊಂದಿಕೊಂಡ ಬಗೆ , ಸಮಕಾಲೀನ ರಾಜಕೀಯಕ್ಕೆ ಅವರು ನೀಡಿದ ಪ್ರತಿಸ್ಪಂದನೆ ಮತ್ತು ಕರ್ನಾಟಕದ ಚರಿತ್ರೆಗೆ ಸಂಬಂಧಿಸಿದಂತೆ ಕಾರ್ನಾಡರು ಬರೆದ ಮೂರು ನಾಟಕಗಳು ಮತ್ತು ಅವುಗಳ ಪ್ರಸ್ತುತತೆಯ ಬಗ್ಗೆ ಮಾತಾಡಿದ್ದಾರೆ . ಈ ಮಾತುಗಳನ್ನು 2019 ರ ಆಗಸ್ಟ್ ನಲ್ಲಿ ರೆಕಾರ್ಡ್ ಮಾಡಿಕೊಳ್ಳಲಾಗಿದೆ.

ಕತೆ : ಕಮಲಪುರದ ಹೋಟ್ಲಿನಲ್ಲಿ ಕತೆಗಾರರು : ಪಂಜೆ ಮಂಗೇಶರಾಯರು ಓದು : ಕಿಶನ್. ಆರ್

ಕತೆ : ಅಣ್ಣಯ್ಯನ ಮಾನವಶಾಸ್ತ್ರ ಕತೆಗಾರರು : ಎ. ಕೆ . ರಾಮಾನುಜನ್ ಓದು : ಸಿದ್ದಾರ್ಥ ಮಾಧ್ಯಮಿಕ

ಮೂಡಲ ಸೀಮೇಲಿ ಕೊಲೆಗಿಲೆ ಮುಂತಾಗಿ ಸಂಕಲನ : ದ್ಯಾವನೂರು ಕತೆಗಾರ : ದೇವನೂರು ಮಹಾದೇವ ಓದು : ಮೌನೇಶ್ ಬಡಿಗೇರ್ *********************** ಹಣ ಎಲ್ಲದಕ್ಕಿಂತ ದೊಡ್ಡದಲ್ಲ; ಆದರೇ ಹಣವಿರದೇ ಋತುಮಾನದಂತಹ ಕನಸುಗಳು ಈಡೇರುವುದು ಕಷ್ಟಸಾಧ್ಯ. ಹೆಜ್ಜೆ ಹೆಜ್ಜೆಗೂ ಖರ್ಚಿನ ಬಾಬತ್ತಿರುವ ಈ ದುಬಾರಿ ದುನಿಯಾದಲ್ಲಿ ಧನ ಸಹಾಯವನ್ನೂ ನಾವು ಅಪೇಕ್ಷಿಸುತ್ತೇವೆ. ಮಿಂದಾಣಕ್ಕೆ ತಗಲುವ ವಾರ್ಷಿಕ ಶುಲ್ಕ, ಬರಹಗಾರರಿಗೆ ಗೌರವ ಧನ ನೀಡಲು, ಸಂದರ್ಶನಗಳನ್ನು ಚಿತ್ರಿಕರಿಸಲು, ಪ್ರಯಾಣಕ್ಕೆ, ಆಕಾಶವಾಣಿ , ದೂರದರ್ಶನ ಸೇರಿದಂತೆ ಹಲವೆಡೆ ಸಂಗ್ರಹಿತವಾಗಿರುವ ಅಮೂಲ್ಯ ದೃಶ್ಯ-ಶ್ರವ್ಯ ವನ್ನು ಹೊರ ತೆಗೆಸಲು, ಹೀಗೆ ಪ್ರತಿಯೊಂದಕ್ಕೂ ಹಣದ ಅಗತ್ಯವಿದೆ. ಹೀಗಾಗಿ ಆರ್ಥಿಕವಾಗಿಯೂ ನೀವು ನಮಗೆ ನೆರವಾಗಬಹುದು. ಋತುಮಾನಕ್ಕೆ ನೆರವಾಗಲು ಇಲ್ಲಿ ಕ್ಲಿಕ್ ಮಾಡಿhttps://yt.orcsnet.com/#ruthumana [https://www.youtube.com/redirect?event=video_description&v=ICCrCl-57F8&q=https%3A%2F%2Fyt.orcsnet.com%2F%23ruthumana&redir_token=VfWpudiQ6tPKBZZ9NEhMfVsZXJd8MTU4OTMwOTM1NEAxNTg5MjIyOTU0]

ಋತುಮಾನಕ್ಕೆ ನೆರವಾಗಲು ಇಲ್ಲಿ ಕ್ಲಿಕ್ ಮಾಡಿ https://yt.orcsnet.com/#ruthumana [https://www.youtube.com/redirect?event=video_description&v=lLSPdQaI-Ok&redir_token=bMDG5zvYRw8AKxbVv6GAM0skOiV8MTU4NjkyODQ0OEAxNTg2ODQyMDQ4&q=https%3A%2F%2Fyt.orcsnet.com%2F%23ruthumana] ಡಾ. ಬಿ. ಆರ್. ಅಂಬೇಡ್ಕರ್ ಅವರ ಹುಟ್ಟುಹಬ್ಬದ ನೆನಪಿಗಾಗಿ ಮಾಡಿರುವ ಈ ವಿಶೇಷ ಪಾಡ್ಕಾಸ್ಟ್ ನಲ್ಲಿ ಪ್ರೊ. ವೆಲೇರಿಯನ್ ರೋಡ್ರಿಗಸ್ ಅವರು "ಅಂಬೇಡ್ಕರ್ ಮತ್ತು ಧರ್ಮ" ಎಂಬ ವಿಷಯವನ್ನು ಚರ್ಚಿಸಿದ್ದಾರೆ . ಅಂಬೇಡ್ಕರ್ ಅವರ ಧರ್ಮದ ಪರಿಕಲ್ಪನೆ , ಭಾರತದ ವಿವಿಧ ಧರ್ಮಗಳ ಕುರಿತಾಗಿ ಅಂಬೇಡ್ಕರ್ ಚಿಂತನೆ ಮತ್ತು ಕೊನೆಗೆ ಬೌದ್ದ ಧರ್ಮದ ಆಯ್ಕೆಗೆ ಅಂಬೇಡ್ಕರ್ ನೀಡಿರುವ ಕಾರಣಗಳನ್ನು ಇಲ್ಲಿ ಪ್ರೊ. ವೆಲೇರಿಯನ್ ರೋಡ್ರಿಗಸ್ ವಿವರಿಸಿದ್ದಾರೆ. ಇಲ್ಲಿಯವರೆಗೆ ಹದಿನೈದಕ್ಕೂ ಹೆಚ್ಚು ಮರುಮುದ್ರಣಗಳನ್ನು ಕಂಡಿರುವ "The Essential Writings of B.R. Ambedkar" (2002) ಪುಸ್ತಕದ ಸಂಪಾದಕರಾದ ಡಾ. ವೆಲೆರೀಯನ್ ರೊಡ್ರಿಗಸ್, ಭಾರತದ ಅತ್ಯಂತ ಪ್ರಮುಖ ಅಂಬೇಡ್ಕರ್ ವಿದ್ವಾಂಸರಲ್ಲಿ ಒಬ್ಬರು.