
Kelirondu Katheya ಕೇಳಿರೊಂದು ಕಥೆಯ
Podcast door Kelirondu Katheya Team
Tijdelijke aanbieding
1 maand voor € 1
Daarna € 9,99 / maandElk moment opzegbaar.

Meer dan 1 miljoen luisteraars
Je zult van Podimo houden en je bent niet de enige
4.7 sterren in de App Store
About Kelirondu Katheya ಕೇಳಿರೊಂದು ಕಥೆಯ
Kannada Stories for children.
Alle afleveringen
124 afleveringen
ಮಕ್ಕಳೆಂದರೆ ಕುತೂಹಲ , ಕುತೂಹಲ ಅಂದರೆ ಮಕ್ಕಳು . ದುಬಾರಿಯಾದ ಆಟದ ಸಾಮಾನಿರಲಿ , ಮೂಲೆಯಲ್ಲಿ ಬಿದ್ದಿರೋ ಕಲ್ಲಿರಲಿ , ಮಕ್ಕಳಿಗೆ ಎಲ್ಲವೂ ಆಕರ್ಷಕ ಅಂತಲೇ ತೋರುತ್ತದೆ . ಒಮ್ಮೆ , ಶಾಲೆಯಲ್ಲಿ ಆಟ ಆಡ್ತಿದ್ದ ಮಕ್ಕಳಿಗೆ ಒಂದು ವಿಚಿತ್ರ ಪ್ರಾಣಿ ಕಣ್ಣಿಗೆ ಬಿತ್ತು . ಕೊಂಬೆಯಿಂದ ಕೊಂಬೆಗೆ ಜಿಗಿಯುತ್ತಿದ್ದ ಈ ಪ್ರಾಣಿಯು ಮಕ್ಕಳಿಗೆ ಆಟದ ಸಾಮಾನಿನ ತರಹ ತೋರಿತು . ಪ್ರಾಣಿಯನ್ನು ಮಕ್ಕಳು ಏನು ಮಾಡಿದರು ? ಬನ್ನಿ , ಈ ಕತೆಯಲ್ಲಿ ತಿಳಿಯೋಣ .

ಕಥೆಯ ಶೀರ್ಷಿಕೆ ವಿಚಿತ್ರ ಅನ್ನಿಸುತ್ತಾ ? ಹೌದು .. ರಾಮಾಯಣದ ಈ ಅಪರೂಪದ ಕತೆ ಕೇಳೋಕೆ ಬಹು ಮಜಾ . ಜತೆಗೆ , ಹನುಮಂತ ಹಾಗೂ ರಾಮನ ಗೆಳೆತನ ಎಷ್ಟು ಗಾಢವಾಗಿತ್ತು ಅನ್ನುವುದಕ್ಕೆ ಸಾಕ್ಷಿ ಕೂಡ .

ಕಾಡಿನಲ್ಲಿ ವಾಸ ಆಗಿದ್ದ ಕಾಗೆ ಮರಿಗೆ ನೀರಿನಲ್ಲಿ ಈಜುತ್ತಿದ್ದ ಬೆಳ್ಳಗೆ ಸುಂದರವಾಗಿದ್ದ ಹಂಸವನ್ನ ಕಂಡಾಗ ಒಂಥರಾ ಅಸೂಯೆ ಆಯ್ತು . ಹಾಗೆ , ಸ್ವಲ್ಪ ಭಯ ಕೂಡ ಆಯ್ತು . ತಕ್ಷಣ ಅಮ್ಮನ ಬಳಿ ಹೋಗಿ , ಹೇಳಿದಾಗ , ಅಮ್ಮ ಹೇಳಿದ್ದೇನು ? ಆಗ ಕಾಗೆ ಮರಿಗೆ ಏನನ್ನಿಸಿತು ? ಸಂವಿತ್ ಫೌಂಡೇಶನ್ ಅವರ ಸಹಯೋಗದಲ್ಲಿ ಮಾಡಿದ ಈ ಪುಟ್ಟ ಕತೆ ಹೇಳುವ ನೀತಿ ಮಾತ್ರ ಬಹಳ ದೊಡ್ಡದು .

ಕಾಡಿನಲ್ಲಿ ಆನೆ ಮರಿ ಒಂದು ಹುಟ್ಟಿತು . ಎಲ್ಲ ರೀತಿಯಲ್ಲೂ ಬೇರೆ ಆನೆಗಳ ಥರಾನೇ ಇದ್ದ ಆನೆ ಮರಿ ನೋಡೋಕೆ ಮಾತ್ರ ನೀಲಿ ಬಣ್ಣ ಇತ್ತು !. ಆ ಬಣ್ಣದ ಜತೆ ಕಾಡಿನಲ್ಲಿ ಬೇರೆ ಮರಿಗಳ ಜತೆ ಬೇರೆಯೋಕೆ ಈ ಆನೆ ಮರಿಗೆ ಸಾಧ್ಯ ಆಯಿತೇ ?

ರಕ್ಷಿತ್ ಗೆ ಕಾರುಗಳು ಅಂದರೆ ತುಂಬಾ ಇಷ್ಟ. ಒಂದು ದಿವಸ ಅವನ ಅಮ್ಮ ಅವನಿಷ್ಟದ ಕೆಂಪು ಕಾರನ್ನ ಗೊತ್ತಿಲ್ಲದೇ ಬಡ ಮಕ್ಕಳಿಗೆ ದಾನ ಮಾಡಿದಾಗ ರಕ್ಷಿತ್ ಗೆ ಆದ ದುಃಖ ಅಷ್ಟಿಷ್ಟಲ್ಲ . ಆಗ ರಕ್ಷಿತ್ ಏನು ಮಾಡಿದ ? ಬನ್ನಿ ಈ ಕತೆ ಕೇಳಿ ತಿಳಿದುಕೊಳ್ಳೋಣ

Meer dan 1 miljoen luisteraars
Je zult van Podimo houden en je bent niet de enige
4.7 sterren in de App Store
Tijdelijke aanbieding
1 maand voor € 1
Daarna € 9,99 / maandElk moment opzegbaar.
Exclusieve podcasts
Advertentievrij
Gratis podcasts
Luisterboeken
20 uur / maand

































